ನೊಡಬಲ್ಲೆ ಜಗತ್ತನ್ನುಎಂದುಕೊಂಡೆ
ಆದರೆ ಜಗತ್ತಿಗೆ ಕಣ್ಣೆ ಇಲ್ಲಾವಾದಂತಿದೆ
ಕಣ್ಣಲ್ಲಿ ನೋಡೋಕೆ ಆಗದಂಥ ದೃಶ್ಯವನ್ನು
ಕನಡಕ ಸಹಾಯದಿಂದ ನೋಡಿದೇನು
ಕಂಡಿದ್ದು ಇಷ್ಟೇ!
ದಂಡು ದಾಳಿಗೆ ಒಳಗಾದ ದೇಶಗಳು
ಆಕ್ರಮಕ್ಕೆ ಬಲಿಯಾದ ಹೆಣ್ಣುಮಕ್ಕಳು
ಜೀವನದ ಚಕ್ರದಲ್ಲಿ ಕಳೆದುಹೋಗಿರುವ ಮನುಷ್ಯರು
ಹಾಗೂ ಇನ್ನೂ ಇದನೆಲ್ಲ ನೋಡಬೇಕೇ
ಎನ್ನುವ ವೃದ್ಧರು
ಕಂಡಿದ್ದು ಇಷ್ಟೇ!
ಜಗತ್ತೇ ಕುರುಡು ಆಗೋಗಿದೆ
ಆದರೆ ನಿಜವಾಗಲೂ ಕುರುಡಾಗಿರುವವರು
ಪುಣ್ಯ ಮಾಡಿದವರು
ತಮ್ಮದೇ ಲೋಕದಲ್ಲಿ ತಮ್ಮ ಪಾಡಿಗೆ ಇರುವುದೇ
ಒಂದು ರೀತಿಯ ಸುಖ
ಅನ್ಸಿದ್ದು ಇಷ್ಟೇ!
ಕೊನೆಗೆ ಕಾಡುವುದು ಒಂದೇ ಪ್ರಶ್ನೆ
ಕನ್ನಡಕ ಏಕೆ ಬೇಕು?
ನಡೆಯುವ ಜೀವನದ ದೃಶ್ಯಗಳನ್ನು
ನೋಡಿದರೂ ಒಂದೇ ನೋಡದೆ ಇರುವುದು ಒಂದೇ
ಬೇಡ ಇಂಥ ಕೆಟ್ಟು ದೃಶ್ಯಗಳ ಚಿತ್ರಣ
ಜೀವನವೇ ಇಷ್ಟೇ!