Thursday 8 June 2023

ಕನ್ನಡಕ

ಕನ್ನಡಕವನ್ನು ನಾ ಹಿಡಿದು
ನೊಡಬಲ್ಲೆ ಜಗತ್ತನ್ನುಎಂದುಕೊಂಡೆ
ಆದರೆ ಜಗತ್ತಿಗೆ ಕಣ್ಣೆ ಇಲ್ಲಾವಾದಂತಿದೆ
ಕಣ್ಣಲ್ಲಿ ನೋಡೋಕೆ ಆಗದಂಥ ದೃಶ್ಯವನ್ನು
ಕನಡಕ ಸಹಾಯದಿಂದ ನೋಡಿದೇನು 
ಕಂಡಿದ್ದು ಇಷ್ಟೇ!

ದಂಡು ದಾಳಿಗೆ ಒಳಗಾದ ದೇಶಗಳು
ಆಕ್ರಮಕ್ಕೆ ಬಲಿಯಾದ ಹೆಣ್ಣುಮಕ್ಕಳು
ಜೀವನದ ಚಕ್ರದಲ್ಲಿ ಕಳೆದುಹೋಗಿರುವ ಮನುಷ್ಯರು
ಹಾಗೂ ಇನ್ನೂ ಇದನೆಲ್ಲ ನೋಡಬೇಕೇ
ಎನ್ನುವ ವೃದ್ಧರು
ಕಂಡಿದ್ದು ಇಷ್ಟೇ!

ಜಗತ್ತೇ ಕುರುಡು ಆಗೋಗಿದೆ
ಆದರೆ ನಿಜವಾಗಲೂ ಕುರುಡಾಗಿರುವವರು 
ಪುಣ್ಯ ಮಾಡಿದವರು 
ತಮ್ಮದೇ ಲೋಕದಲ್ಲಿ ತಮ್ಮ ಪಾಡಿಗೆ ಇರುವುದೇ
ಒಂದು ರೀತಿಯ ಸುಖ
ಅನ್ಸಿದ್ದು ಇಷ್ಟೇ!

ಕೊನೆಗೆ ಕಾಡುವುದು ಒಂದೇ ಪ್ರಶ್ನೆ
ಕನ್ನಡಕ ಏಕೆ ಬೇಕು?
ನಡೆಯುವ ಜೀವನದ ದೃಶ್ಯಗಳನ್ನು 
ನೋಡಿದರೂ ಒಂದೇ ನೋಡದೆ ಇರುವುದು ಒಂದೇ
ಬೇಡ ಇಂಥ ಕೆಟ್ಟು ದೃಶ್ಯಗಳ ಚಿತ್ರಣ
ಜೀವನವೇ ಇಷ್ಟೇ!

6 comments:

  1. ಕನ್ನಡಕ ಇಲ್ಲಿ ನೆಪ ಮಾತ್ರದ ಪ್ರತಿಮೆ, ಅದರ ಮುಖೇನ ಅವಗಾಹನೆಗೆ ನಿಲುಕುವ ಜಗದ ಸ್ಪಷ್ಟ - ಅಸ್ಪಷ್ಟ ಆಗುಹೋಗುಗಳ ತುಲನಾತ್ಮಕ ನೋಟ ಇಲ್ಲಿ ಮಿಳಿತವಾಗಿದೆ.

    ಉತ್ತಮ ರಚನೆ ಕವಯಿತ್ರಿ...

    ReplyDelete
    Replies
    1. ಧನ್ಯವಾದಗಳು ಬದ್ರಿ ಅಂಕಲ್ ನಿಮ್ಮ ಮೆಚ್ಚುಗೆಯ ಮಾತುಗಳಿಗೆ

      Delete
  2. A unique perspective to see the world. Good one dear princess. 😍

    ReplyDelete
  3. Amazing very minute things u have covered dear...Great thought..

    ReplyDelete
  4. ಒಂದು ಉತ್ತಮ ಪ್ರಯತ್ನ ಶೀತಲ್ ಸೊಗಸಾಗಿ ಮೂಡಿಬಂದಿದೆ ಬರಹ ಹೀಗೆ ಸಾಗಲಿ ಇನ್ನೂ ಒಳ್ಳೆಯ ಬರವಣಿಗಳು ಚಿಗುರಲಿ‌. ಶುಭವಾಗಲಿ ಶುಭ ಹಾರೈಕೆಗಳು ಪುಟ್ಟಿ 😍

    ReplyDelete